top of page

ಒಂದಾನೊಂದು ಕಾಲದಲ್ಲಿ 2020 ( ಲಾಕ್ಡೌನ್ ನೆನಪುಗಳು)- ಮಾನ್ಯ ಹರ್ಷ

ಒಂದಾನೊಂದು ಕಾಲದಲ್ಲಿ... ( 2020 ಲಾಕ್‌ಡೌನ್ ಡೈರೀಸ್) ಈ ಪುಟ್ಟ ಲೇಖಕಿಯ ಎರಡನೇ ಕನ್ನಡ ಕೃತಿ. ಮಾನ್ಯ ಸಕಾರಾತ್ಮಕ ಹುಡುಗಿಯಾಗಿದ್ದು , ಆಶಾವಾದವು ಈಕೆಯ ಬರಹಗಳಲ್ಲಿ ಪ್ರತಿಫಲಿಸುತ್ತದೆ. ಭಾರತದ ಅತ್ಯಂತ "ಕಿರಿಯ ಕವಿ" ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮಾನ್ಯ, ಪ್ರಕೃತಿ ಪ್ರಧಾನವಾದ ಕಥೆಗಳಿಗೆ ಹೆಸರುವಾಸಿ. ಈಕೆಯ ಎಲ್ಲಾ ಪುಸ್ತಕಗಳೂ ಇದಕ್ಕೆ ಸಾಕ್ಷಿಯಾಗಿದೆ.



2020 ಒಂದು ಅನಿರೀಕ್ಷಿತ ವರ್ಷವಾಗಿದೆ.ಯಾರೂ ಕನಸಿನಲ್ಲೂ ಊಹಿಸದಂತಹ ಸನ್ನಿವೇಶಗಳು ಮನುಷ್ಯರನ್ನು ಚಿಂತೆಗೀಡು ಮಾಡಿದೆ. ಇದನ್ನು ಮಾನವ ಪರಿವರ್ತನೆಯ ಯುಗ ಅನ್ನಿ ಅಥವಾ ವಿಪತ್ತು! ಎಂದರೂ ತಪ್ಪಾಗಲಾರದು !


2020! ಒಂದು ಸಣ್ಣ ವೈರಾಣುವಿನ ಆರ್ಭಟಕ್ಕೆ ಹೆದರಿ , ಇಡೀ ಮನುಕುಲವು ಸಾಮಾಜಿಕ, ಆರ್ಥಿಕ, ಮಾನಸಿಕ ಅನಿಶ್ಚಿತತೆ, ಆತಂಕ ಮತ್ತು ಭಯವನ್ನು ಅನುಭವಿಸುತ್ತಿದ್ದರೆ, ಇತ್ತ ಯುವ ಲೇಖಕಿಯು ಲಾಕ್‌ಡೌನ್‌ನ ಸಕಾರಾತ್ಮಕ ಅಂಶಗಳ ಮೇಲೆ ಬೆಳಕು ಚೆಲ್ಲುತ್ತಾರೆ. ಮಕ್ಕಳ ಗುಂಪಿನ ನಡುವಿನ ಚರ್ಚೆಯೊಂದಿಗೆ ತೆರೆದುಕೊಳ್ಳುವ ಕಥೆ, ಸಾಗಿದಂತೆ , ತಂದೆ-ಮಗಳು, ಒಡಹುಟ್ಟಿದವರ ಸಂಬಂಧದ ಕ್ಲೀಷೆ, ಮಕ್ಕಳು ಮತ್ತು ಪೋಷಕರಲ್ಲಿ ಉಂಟಾಗುವ ಭಯ, ಮಾನಸಿಕ ಒತ್ತಡ, ಆಘಾತ, ತಾಯಿಯ ಗೌಂದಲ, ಹಳೆಯ ಹವ್ಯಾಸವನ್ನು ಪುನರಾರಂಭಿಸುವುದು, ಸೋಮಾರಿಯಾಗಿದ್ದವ ಯುವ ವಿಜ್ಞಾನಿ ಯಾದ ಬಗೆ ; ಎಷ್ಟೇ ಹಣವಿದ್ದರೂ ಮಗನನ್ನು ಮನೆಗೆ ಕರೆಸಿಕೊಳ್ಳುಲು ಸಾಧ್ಯವಾಗದ ನಿಸ್ಸಾಹಯಕ ತಂದೆ, ವಿನಾಶದಿಂದ ಪುನರ್ ನಿರ್ಮಾಣದತ್ತ ಪ್ರಕೃತಿಯ ಪಯಣ, ಹೀಗೆ ಪುಸ್ತಕವು ವಿವಿಧ ಸಣ್ಣ ನಿದರ್ಶನಗಳು ಮತ್ತು ಘಟನೆಗಳ ಸುತ್ತ ಸುತ್ತುತ್ತದೆ.

ಒಂದಾನೊಂದು ಕಾಲದಲ್ಲಿ ( 2020 ಲಾಕ್ಡೌನ್ ಡೈರೀಸ್) ನಿಜ ಜೀವನದ ಕಥೆಗಳ ಒಂದು ನೋಟವಾಗಿದ್ದು ಓದುಗರ ಮನಸ್ಸಿಗೆ ನಾಟುವಂತಿದೆ.


ಪ್ರತಿಯೊಂದು ಕಥೆಯೂ ವಿಲ್ಲನ್ ಮತ್ತು ಸೂಪರ್ ಹೀರೋ ಇಲ್ಲದೆ ಅಪೂರ್ಣವಾಗಿದೆ. ಪುಟ್ಟ ಲೇಖಕಿ, ಕರೋನಾ ವೈರಸ್ ಅನ್ನು ವಿಲ್ಲನ್ ಮತ್ತು ಅದರ ವಿರುದ್ಧ ಹೋರಾಡುವ ಮಾನವನ ಧೈರ್ಯವನ್ನು ಸೂಪರ್ಹೀರೋಗೆ ಹೋಲಿಸಿದ್ದಾರೆ. ಈ ಯುವ ಲೇಖಕಿ ಸಾಂಕ್ರಾಮಿಕ ಮತ್ತು ಮಾನವಕುಲದ ನಡುವಿನ ವಿವಿಧ ರೀತಿಯ ಹೋರಾಟದ ನಿದರ್ಶನಗಳನ್ನು ಎಳೆ ಎಳೆಯಾಗಿ ಬಿಡಿಸಿಡುವ ಪ್ರಯತ್ನವೇ.. " ಒಂದಾನೊಂದು ಕಾಲದಲ್ಲಿ "( 2020 ಲಾಕ್ಡೌನ್ ಡೈರೀಸ್)





Comments


Drop Me a Line, Let Me Know What You Think

Thanks for submitting!

bottom of page